ಬಿಗ್ಬಾಸ್ ಕನ್ನಡ ಸೀಸನ್ 13ರ ಎರಡು ವಾರಗಳ ಜರ್ನಿಯಲ್ಲಿ ಕಾವ್ಯಾ ಗೌಡ ಹಲವು ವಿಭಿನ್ನ ಶೇಡ್ಗಳನ್ನು ತೋರಿಸಿದ್ದಾರೆ. ಕ್ಯೂಟ್ ರಿಯಾಕ್ಷನ್ಗಳು, ಫನ್ನಿ ಮಾತುಗಳು, ಡ್ಯಾನ್ಸ್, ಟಾಸ್ಕ್ನಲ್ಲಿನ ಎನರ್ಜಿ, ಸಣ್ಣಪುಟ್ಟ ಜಗಳಗಳು, ಫ್ಲರ್ಟಿಂಗ್ಗೆ ಕೊಟ್ಟ ಉತ್ತರಗಳು ಹಾಗೂ ತಮ್ಮ ನಿಲುವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುವ ಸ್ವಭಾವ—ಕಾವ್ಯಾ ಅವರ ಈ ಎಲ್ಲ ಮುಖಗಳು ಮೊದಲ ಎರಡು ವಾರಗಳಲ್ಲೇ ಪ್ರೇಕ್ಷಕರ ಗಮನ ಸೆಳೆದಿವೆ.
ಬಿಗ್ಬಾಸ್ ಮನೆಯಲ್ಲಿ ಕೆಲವರು ತಮ್ಮ ಆಟದಿಂದ ಗಮನ ಸೆಳೆಯುತ್ತಾರೆ. ಇನ್ನು ಕೆಲವರು ತಮ್ಮ ಮಾತಿನಿಂದ. ಕೆಲವರು ಮನರಂಜನೆಯಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಆದರೆ ಕಾವ್ಯಾ ಗೌಡ ಅವರ ಜರ್ನಿಯಲ್ಲಿ ಈ ಎಲ್ಲವೂ ಒಂದೇ ಸಮಯದಲ್ಲಿ ಕಾಣಿಸಿಕೊಂಡಿದೆ.
ಒಂದು ಕ್ಷಣ ಕ್ಯೂಟ್ ಆಗಿ ನಗುವ ಕಾವ್ಯಾ, ಮತ್ತೊಂದು ಕ್ಷಣ ತಮ್ಮ ನಿಲುವಿನ ವಿಚಾರದಲ್ಲಿ ಖಡಕ್ ಆಗಿ ಮಾತನಾಡುತ್ತಾರೆ. ಟಾಸ್ಕ್ ಬಂದಾಗ ಹಿಂದೆ ಸರಿಯದೆ ಸ್ಪರ್ಧಿಸುತ್ತಾರೆ. ಮನೆಯವರ ಜೊತೆ ಫನ್ ಮಾಡುತ್ತಾರೆ. ಸಣ್ಣ ವಿಚಾರಕ್ಕೂ ತಮ್ಮದೇ ಆದ ಸ್ಟೈಲ್ನಲ್ಲಿ ರಿಯಾಕ್ಟ್ ಮಾಡುತ್ತಾರೆ. ಇದೇ ಕಾರಣಕ್ಕೆ ಎರಡು ವಾರಗಳಲ್ಲೇ ಕಾವ್ಯಾ ಅವರ ಜರ್ನಿ ಹಲವು ಶೇಡ್ಗಳನ್ನು ಪಡೆದುಕೊಂಡಿದೆ.
ಟಾಸ್ಕ್ ಅಂದ್ರೆ ಕಾವ್ಯಾ ಹಿಂದೆ ಸರಿಯಲ್ಲ!

ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ಗಳು ಬಂದಾಗ ಕಾವ್ಯಾ ತಮ್ಮ ಬೆಸ್ಟ್ ನೀಡಬೇಕು ಎಂಬ ಮನಸ್ಥಿತಿಯಲ್ಲೇ ಕಾಣಿಸಿಕೊಂಡಿದ್ದಾರೆ.
ಗೇಮ್ನಲ್ಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುವುದರ ಜೊತೆಗೆ, ಟಾಸ್ಕ್ ಸಂದರ್ಭದಲ್ಲಿ ಎದುರಾಳಿಗಳ ಜೊತೆ ವಾದ-ವಿವಾದ ನಡೆದರೂ ಅದನ್ನು ಮೀರಿ ಮತ್ತೆ ಆಟದತ್ತ ಗಮನ ಹರಿಸುವ ಪ್ರಯತ್ನ ಮಾಡಿದ್ದಾರೆ.
ಟಾಸ್ಕ್ನಲ್ಲಿ ಕಾವ್ಯಾ ಅವರನ್ನು ಎತ್ತಿಕೊಂಡು ಮೂರು ರೌಂಡ್ ಸುತ್ತಿಸಿದಾಗ ತಡವ್ ಲವರ್ ಥರ ಆಕ್ಟ್ ಮಾಡಿದ್ದು ಫುಲ್ ಫನ್ ಮೂಮೆಂಟ್ ಆಗಿತ್ತು. ಮತ್ತೊಂದೆಡೆ ಮನೆಯವರು ಟಾಸ್ಕ್ ವಿಚಾರದಲ್ಲಿ ಜೋರಾಗಿ ವಾದಿಸುತ್ತಿದ್ದಾಗ ಕಾವ್ಯಾ, “ರಿಯಲ್ ಆಗಿ ವಾದಿಸುತ್ತಿದ್ದೀರಾ ನನ್ ಮಕ್ಕಳು” ಎಂಬ ರೀತಿಯಲ್ಲಿ ನೀಡಿದ ಪ್ರತಿಕ್ರಿಯೆಯೂ ಅವರ ಕ್ಯೂಟ್ ಎಕ್ಸ್ಪ್ರೆಷನ್ಗೆ ಮತ್ತೊಂದು ಉದಾಹರಣೆಯಾಯಿತು.
ಸಂಗೀತಾ ಜೊತೆಗಿನ ಕ್ಯೂಟ್ ಡ್ಯಾನ್ಸ್, ಹಾಡಿನಲ್ಲಿ “ಹೆಣ್ಮಕ್ಳೇ ಸ್ಟ್ರಾಂಗ್ ಗುರು” ಎಂಬ ಮಾತಿಗೆ muscles ತೋರಿಸಿದ ರಿಯಾಕ್ಷನ್—ಟಾಸ್ಕ್ಗಳ ಮಧ್ಯೆಯೂ ಕಾವ್ಯಾ ಅವರ ಫನ್ ಸೈಡ್ ಪದೇಪದೇ ಹೊರಬಂದಿದೆ.
ಕ್ಯೂಟ್ ಕಾವ್ಯಾ… ಫುಲ್ ಎಂಟರ್ಟೈನರ್ ಕೂಡ!

ಕಾವ್ಯಾ ಅವರ ದೊಡ್ಡ ಪ್ಲಸ್ಗಳಲ್ಲಿ ಪ್ರಮುಖವಾದದ್ದು ಅವರ ರಿಯಾಕ್ಷನ್ಗಳು.
ಯಾರಾದರೂ ಏನಾದರೂ ಹೇಳಿದಾಗ ತಕ್ಷಣ ಸ್ಮೈಲ್, ಕನ್ಫ್ಯೂಷನ್, ಶಾಕ್ ಅಥವಾ ಸಣ್ಣ ಆಕ್ಷನ್ ಮೂಲಕ ಪ್ರತಿಕ್ರಿಯಿಸುವ ಕಾವ್ಯಾ, ಮನೆಯ ಹಲವು ಸಾಮಾನ್ಯ ಕ್ಷಣಗಳನ್ನೂ ಎಂಟರ್ಟೈನಿಂಗ್ ಆಗಿಸಿದ್ದಾರೆ.
ಸುದೀಪ್ ಅವರು ತಡವ್ ಅವರನ್ನು “ಬ್ರ್ಯಾಂಡ್ ಅಂಬಾಸಿಡರ್” ಎಂದು ಕಿಚಾಯಿಸಿದಾಗ ಕಾವ್ಯಾ ಕೊಟ್ಟ ಕ್ಯೂಟ್ ರಿಯಾಕ್ಷನ್ ಗಮನ ಸೆಳೆಯಿತು. ನಂತರ “ಬ್ರ್ಯಾಂಡ್ ಅಂಬಾಸಿಡರ್, ಯು ಆರ್ ಸೇಫ್” ಎಂದಾಗ ಕೈ ಮುಗಿದು ಕರ್ನಾಟಕದ ಜನತೆಗೆ ಥ್ಯಾಂಕ್ಸ್ ಹೇಳಿದ ರೀತಿಯೂ ಫನ್ ಮೂಮೆಂಟ್ ಆಗಿತ್ತು.
ಇನ್ನು ಸುದೀಪ್ ಅವರು ಕಾಕ್ರೋಚ್ ಆಕ್ಷನ್ ತೋರಿಸಿದಾಗ ಕಾವ್ಯಾ ನಕ್ಕ ರೀತಿ, ಸ್ವೀಟ್ ಬಾಕ್ಸ್ನಲ್ಲಿ “ಖಾರ ಸ್ವೀಟ್” ಬಗ್ಗೆ ಚರ್ಚೆ ಮಾಡಿದ ರೀತಿ—ಸಣ್ಣ ಸಣ್ಣ ಮಾತುಗಳಿಗೂ ಕಾವ್ಯಾ ನೀಡುವ ರಿಯಾಕ್ಷನ್ಗಳು ಅವರ ಎಂಟರ್ಟೈನರ್ ಸೈಡ್ ಅನ್ನು ಮತ್ತಷ್ಟು ಹೈಲೈಟ್ ಮಾಡಿವೆ.
ಕ್ಯೂಟ್ ಸ್ಮೈಲ್ ಬದಿಗಿಟ್ಟು… ಖಡಕ್ ಮಾತು!

ಆದರೆ ಕಾವ್ಯಾ ಕೇವಲ ಕ್ಯೂಟ್ ರಿಯಾಕ್ಷನ್ಗಳನ್ನು ನೀಡುತ್ತಾ ಇರುವ ಸ್ಪರ್ಧಿ ಅಲ್ಲ ಎಂಬುದನ್ನೂ ಈ ಎರಡು ವಾರಗಳು ಸ್ಪಷ್ಟಪಡಿಸಿವೆ.
ತಮ್ಮ ನಿಲುವಿನ ವಿಚಾರ ಬಂದಾಗ ಕಾವ್ಯಾ ನೇರವಾಗಿ ಮಾತನಾಡಿದ್ದಾರೆ.
ಧನುಷ್ ಜೊತೆಗಿನ “ಕಂಟೆಂಟ್” ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ ಕಾವ್ಯಾ,
“ಕಂಟೆಂಟ್ ಬೇಕು ಅಂದ್ರೆ ಬೇರೆ ಅವ್ರ ಇಟ್ಕೋ, ನನ್ನತ್ರ ಬೇಡ.”
ಎಂದು ಖಡಕ್ ಆಗಿ ಹೇಳಿದ್ದಾರೆ.
ನಂತರ “ನನಗೆ ಇಂಟರೆಸ್ಟ್ ಇಲ್ಲ, ಐ ಆ್ಯಮ್ ನಾಟ್ ಇಂಟರೆಸ್ಟೆಡ್ ಟು ಟಾಕ್ ಟು ಯು” ಎಂದು ಸ್ಪಷ್ಟವಾಗಿ ಹೇಳುವ ಮೂಲಕ ತಮ್ಮ ಗಡಿಯನ್ನು ಕೂಡ ತೋರಿಸಿದ್ದಾರೆ.
ಸಾರಿ ಕೇಳಿದ ನಂತರವೂ ತಮ್ಮ ಅಸಮಾಧಾನವನ್ನು ಮುಚ್ಚಿಟ್ಟುಕೊಳ್ಳದೆ,
“ಐ ಡೋಂಟ್ ಅಪ್ರಿಷಿಯೇಟ್ ಇಟ್… ನನಗೆ ಬೇಡ, ನಾನು ಅಪ್ರಿಷಿಯೇಟ್ ಮಾಡಲ್ಲ”
ಎಂದು ಹೇಳಿರುವುದು ಕಾವ್ಯಾ ತಮ್ಮ ವೈಯಕ್ತಿಕ ನಿಲುವಿನ ವಿಚಾರದಲ್ಲಿ ಕಾಂಪ್ರಮೈಸ್ ಮಾಡದ ಸ್ವಭಾವವನ್ನು ತೋರಿಸಿದೆ.
ಮಂಜು ಜೊತೆಗಿನ ಜಗಳ… ಕಾವ್ಯಾ ಅವರ ಮತ್ತೊಂದು ಶೇಡ್!

ಎರಡನೇ ವಾರದಲ್ಲಿ ಮಂಜು ಜೊತೆಗಿನ ಕಾವ್ಯಾ ಅವರ ಮಾತಿನ ಚಕಮಕಿಯೂ ಸಾಕಷ್ಟು ಗಮನ ಸೆಳೆಯಿತು.
ಮತ್ತೆ ಮತ್ತೆ ತಮ್ಮ ಜೊತೆ ಜಗಳಕ್ಕೆ ಬರುತ್ತಿದ್ದ ಮಂಜುಗೆ ಕಾವ್ಯಾ,
“ನಿನ್ನ ಜೊತೆ ಮಾತಾಡೋಕೆ ನನಗೆ ಇಂಟರೆಸ್ಟ್ ಇಲ್ಲ, ಎನರ್ಜಿಯೂ ಇಲ್ಲ. ಸುಮ್ಮನೆ ಇರಿಟೇಟ್ ಮಾಡ್ಬೇಡ”
ಎಂದು ಖಡಕ್ ಆಗಿ ಹೇಳಿದ್ದಾರೆ.

